Pages (key to Page Status)
ಒಳಗಣ ಗಂಡನಯ್ಯಾ ಹೊರಗಣ ಮಿಂಡನಯ್ಯಾ. ಎರಡನೂ ನಡೆಸಲು ಬಾರದಯ್ಯಾ. ಲೌಕಿಕ ಪಾರಮಾರ್ಥವೆಂಬೆರಡನೂ ನಡೆಸಲು ಬಾರದಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ ಬಿಲ್ವ ಬೆಳವಲಕಾಯಿ ಒಂದಾಗಿ ಹಿಡಿಯಲು ಬಾರದಯ್ಯಾ.