ಸತ್ವ ರಜ ತಮವೆಂಬವು ಪ್ರಪಂಚುವೆಂದೆಂಬಿರಿ; ಸತ್ವವೆ ಪರತತ್ವ ಕಾರಣ
ಒಂದೆರಡೆಣಿಕೆಯ ಉದಯಾಸ್ತಮಾನವುಂಟೆ ಆತ್ಮವಿತ್ತುವಿಂಗೆ ? ಉದಕವನುಂಡ ಲೋಹದ ಪರಿಯಂತೆ ಇರಬೇಕು
ಮೂಗ ಕಂಡ ಕನಸ ನೀವು ಬಲ್ಲಡೆ ಹೇಳಿರೆ ! ಉಪಾಧಿಯಿಲ್ಲದುಪಮೆ
ಭಾವವಿಲ್ಲದ ಭರಿತ
ಇಂದ್ರಿಯವರತ ಪ್ರಕಾಶ ನೋಡಿರೆ ! ಕಾರಣವಿಲ್ಲದ ಕಾರ್ಯ
ಕೇಳಲಿಲ್ಲದ ಉಲುಹು
ಬೇಡಲಿಲ್ಲದ ಪದವಿದು. ತೋರಿ
ಆದಿ ಅಂತ್ಯವಿಲ್ಲದ
ತ್ಯಪ್ತಿಯಡಗಿದ ನಿಜಕ್ಕೆ ನಾನು ನೀನೆಂಬೊಂದು ಪ್ರತಿಯುಂಟೆ ? ನಿಜಭಾವವಳಿದಾತ್ಮ ನಿತ್ಯವೆಂಬುದನು ಎಲ್ಲ ಶ್ರುತಿಗಳಲ್ಲಿ ಕೇಳಿಕೊಳ್ಳಿ. ಸುಖದ ಸೋಕಿನ ಪರಿಣಾಮದ ಪದವನು ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೆ ಬಲ್ಲ.