ಕಳ್ಳ ಬಂದಿಕಾರ ಹಾವಾಡಿಗ ಹಾದರಿಗ ಬಂಟನೋಲೆಯಕಾರನೆಂದೆನಾದಡೆ ನೀ ಮುಂತಾಗಿ ಬಂದ ಭಕ್ತರ ನೀನೆಂದೆನ್ನದಿದ್ದಡೆ ಅದೇ ದ್ರೋಹ. ನಡೆನುಡಿ ಹುಸಿಯುಂಟಾದಡೆ ಕೂಡಲಸಂಗನ ತೋರಿದ ಚೆನ್ನಬಸವಣ್ಣನಾಣೆ.