ಅದ್ಭುತವೆಂಬ ಪಿಶಾಚಿ ಮೂರುಲೋಕವನವಗ್ರಹಿಸಿತ್ತಯ್ಯಾ! ಆ ಅದ್ಭುತದೊಳಗೊಂದು ಗ್ರಹ ನಿರಂತರ ನಲಿದಾಡುತ್ತಿದ್ದಿತ್ತಯ್ಯಾ! ವಜ್ರಯೋಗಿ ಖಗರಂಧ್ರಪುರದಲ್ಲಿ ಗುಹೇಶ್ವರಲಿಂಗವು ತಾನೇ ನೋಡಾ.