ಹರನ ಕೊರಳಲಿಪ್ಪ ಕರೋಟಿಮಾಲೆಯ ಶಿರದ ಲಿಖಿತವ ಕಂಡು ಮರುಳ ತಂಡಗಳು ಓದಿ ನೋಡಲು ಇವನಜ ಇವ ಹರಿ ಇವ ಸುರಪತಿ ಇವ ಧರಣೇಂದ್ರ ಇವನಂತಕನೆಂದು ಹರುಷದಿಂದ ಸರಸವಾಡಿತ ಕಂಡು ಹರ ಮುಕುಳಿತನಾಗಿ ನಕ್ಕ ನಮ್ಮ ಕೂಡಲಸಂಗಮದೇವ.