ಸಂಚಲವಿಲ್ಲದ ಭಕ್ತಿವಂಚನೆಯಿಲ್ಲದ ಮಹಾಂತರ ತೋರಾ. ತನುಶುಚಿ ಮನಶುಚಿಗಳನು ತೋರಾ ಇಂತಪ್ಪ ಶಿವಲಿಂಗೈಕ್ಯರ ತೋರಿ ಬದುಕಿಸು ಕೂಡಲಸಂಗಮದೇವಾ.