ಅಕ್ಷರವ ನೋಡಿ ಅಭ್ಯಾಸವ ಕಲಿತು ನಾನಾವರ್ಣವನಿಟ್ಟು (ಕಳೆವಿರಿ?)ಭೋ ಸ್ವರೂಪಾಧಿಕನಲ್ಲ ನಿರೂಪಾಧಿಕನಲ್ಲ ಮಹಾಘನವು ಕಾಣಿ ಭೋ. ಆದಿನಿರಾಳ ಮಧ್ಯನಿರಾಳ ಊಧ್ರ್ವನಿರಾಳ ಗುಹೇಶ್ವರಯ್ಯನು ತಾನೆ.