ಮಜ್ಜನಕ್ಕೆರೆವೆನಲ್ಲದಾನು ಸಜ್ಜನವೆನ್ನಲ್ಲಿಲ್ಲಯ್ಯಾ ! ಎನ್ನಲ್ಲೇನನರಸುವೆ ನಂಬಿಯೂ ನಂಬದ ಡಂಬಕ ನಾನಯ್ಯಾ ಹಾವ ತೋರಿ ಹವಿಯ ಬೇಡುವಂತೆ- ಕೂಡಲಸಂಗಮದೇವಾ. 283