ಅಯ್ಯ ! ಸಮಸ್ತಧಾನ್ಯಾದಿಗಳಲ್ಲಿ
ಸಮಸ್ತ ಫಲಾದಿಗಳಲ್ಲಿ
ಸಮಸ್ತಪುಷ್ಪಪತ್ರಾದಿಗಳಲ್ಲಿ ಮಧುರ
ಒಗರು
ಕ್ಷಾರ
ಆಮ್ಲ
ಕಹಿ
ಲವಣ ಮೊದಲಾದ ಸಮಸ್ತಪರಮಚಿದ್ರಸವಡಗಿರ್ಪಂತೆ
ಷೋಡಶಮದಗಜದಂತರಂಗದ ಮಧ್ಯದಲ್ಲಿ ಸಮಸ್ತ ವೈರಾಗ್ಯ
ತಿರಸ್ಕಾರಸ್ವರೂಪ ಮಹಾ [ಅ]ಜ್ಞಾನವಡಗಿರ್ಪಂತೆ
ಚಂದ್ರಕಾಂತದ ಶಿಲಾಮಧ್ಯದಲ್ಲಿ ಚಿಜ್ಜಲವಡಗಿರ್ಪಂತೆ
ಶಿಶುಗಳು `ಕಂಡ ಕನಸು' ತಂದೆ ತಾಯಿಗಳಿಗೆ ಕಾಣಿಸಿದಂತೆ
ಕರವೀರ
ಸುರಹೊನ್ನೆ
ಜಾಜಿ
ಬಕುಳ
ಪಾದರಿ
ಪಾರಿಜಾತ
ಮೊಲ್ಲೆ
ಮಲ್ಲಿಗೆ
ತಾವರೆ
ನೈದಿಲೆ
ಸಂಪಿಗೆ
ದವನ
ಪಚ್ಚೆ
ಕಸ್ತೂರಿ
ಮರುಗ
ಬಿಲ್ವ ಮೊದಲಾದ ಪುಷ್ಪ ಪತ್ರಾದಿಗಳಲ್ಲಿ ಮಹಾಸದ್ವಾಸನಾ ಸ್ವರೂಪವಾದ ಪರಿಮಳವಡಗಿರ್ಪಂತೆ
ಪ್ರಾಣ
ಅಪಾನ
ವ್ಯಾನ
ಉದಾನ
ಸಮಾನ
ನಾಗ
ಕೂರ್ಮ
ಕೃಕರ
ದೇವದತ್ತ
ಧನಂಜಯವೆಂಬ ದಶವಾಯುಗಳ ಮಧ್ಯದಲ್ಲಿ ಭ್ರಮರನಾದ
ವೀಣಾನಾದ
ಘಂಟಾನಾದ
ಭೇರಿನಾದ
ಮೇಘನಾದ
ಪ್ರಣಮನಾದ
ದಿವ್ಯನಾದ
ಸಿಂಹನಾದ
ಶರಭನಾದ
ಮಹಾನಾದಂಗಳಡಗಿರ್ಪಂತೆ
ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಅಡಗಿರ್ದು
ಜಗದ ಜಡಜೀವರಿಗೆ ಗೋಚರವಿಲ್ಲದಿರ್ಪುದು ನೋಡ ! ಗುಹೇಶ್ವರಲಿಂಗವು
ಚೆನ್ನಬಸವಣ್ಣ