ಲಿಂಗವನೂ ಪ್ರಾಣವನೂ ಒಂದು ಮಾಡಿ ತೋರಿದ ಗುರುವಿದ್ದಾನಲ್ಲಾ ಲಿಂಗವಿದ್ದಾನಲ್ಲಾ ಇದಕ್ಕೆ ಸಾಕ್ಷಿ ಮುಂದೆ ಜಂಗಮವಿದ್ದಾನಲ್ಲಾ_ ಈ ತ್ರಿವಿಧ ದೃಷ್ಟವ ಕಂಡು ಬೇರೆಂಬ ಅಜ್ಞಾನಕ್ಕೆ ನಾನು ಬೆರಗಾದೆನು ಗುಹೇಶ್ವರಾ.