ಐದರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದಿದಾವೆ ಈರೈದು ಹೆಣನು ಬೆಂಬಳುವರು ಬಳಗ ಘನವಾದ ಕಾರಣ ಆ ಹೆಣನು ಬೇಯವು ಕಾಡೂ ನಂದದು ಮಾಡು ಉರಿಯಿತ್ತು ಗುಹೇಶ್ವರಾ