ಪುಟ:ಕರ್ನಾಟಕ ಗತವೈಭವ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨

ಕರ್ನಾಟಕ ಗತವೈಭವ



ಇವನು ಸಾರ್ವಭೌಮತ್ವ ಸೂಚಕವಾದ ಅಶ್ವಮೇಧಯಜ್ಞವನ್ನು ಮಾಡಿ ದಿಗಂತ ಕೀರ್ತಿಯನ್ನು ಪಡೆದನು. ಇವನ ಮಗನಾದ ಮಂಗಳೇಶನು (೫೯೭-೬೦೮) ಮಹಾಕೂಟೇಶ್ವರನ ಭಕ್ತನು, ಬಾದಾಮಿಯಲ್ಲಿಯ ಎಲ್ಲಕ್ಕೂ ದೊಡ್ಡದಾದ ಮೂರನೆಯ ವೈಷ್ಣವ ಗವಿಯನ್ನು ಕೊರೆಯಿಸಿದವನು ಇದೇ ಮಂಗಳೇಶನು.
ವನ ತರುವಾಯ ಪ್ರೌಢ ಪ್ರತಾಪಿಯಾದ ೨ನೆಯ ಪುಲಿಕೇಶಿಯು ಪಟ್ಟವೇರಿದನು(೬೦೯-೬೪೨), ಈ ೨ ನೆಯ ಪುಲಕೇಶಿಯು ಕರ್ನಾಟಕದ ಗಂಗ, ಕದಂಬ, ಪಲ್ಲವ ಮುಂತಾದ ಅರಸರನ್ನು ಗೆದ್ದುದಲ್ಲದೆ, ಕರ್ನಾಟಕವನ್ನು ದಾಟಿ ಹೋಗಿ, ಉತ್ತರದಲ್ಲಿ ಆಳುತ್ತಿದ್ದ, ಕೋಸಲ, ಕಲಿಂಗ, ಮೌರ್ಯ ಮುಂತಾದ ಅರಸರನ್ನೂ, ದಕ್ಷಿಣದಲ್ಲಿಯ ಪಾಂಡ್ಯ, ಚೋಳ, ಕೇರಳ ಮೊದಲಾದ ಅರಸರನ್ನೂ ಪಾದಾಕ್ರಾಂತರನ್ನಾಗಿ ಮಾಡಿದನು. ನೂರು ಹಡಗಗಳುಳ್ಳ ಹಡಗು ಪಡೆಯೊಂದಿಗೆ ಪಶ್ಚಿಮ ಸಮುದ್ರದಲ್ಲಿ ಸೈನ್ಯವನ್ನು ಸಾಗಿಸಿ, ಉತ್ತರಕ್ಕೆ ಮುಂಬಯಿ ಹತ್ತರ ಇರುವ 'ಪರಿ' ಎಂಬ ಪಟ್ಟಣವನ್ನು ತೆಗೆದುಕೊಂಡನು. ಆದರೆ ಈ ಪುಲಿಕೇಶಿಯು ಮಾಡಿದ ಎಲ್ಲಕ್ಕೂ ಮಹತ್ವದ ಕಾರ್ಯವೆಂದರೆ, ಉತ್ತರ ಹಿಂದುಸ್ಥಾನಕ್ಕೆಲ್ಲ ಸಾರ್ವಭೌಮ ಚಕ್ರವರ್ತಿಯಾಗಿದ್ದ ಕನೋಜದ ಅರಸನಾದ 'ಹರ್ಷವರ್ಧನ' ನನ್ನು ನರ್ಮದೆಯ ದಂಡೆಯ ಮೇಲೆ ಸಂಪೂರ್ಣವಾಗಿ ಸೋಲಿಸಿದುದೇ. ಆಗ ಇವನು 'ಪರಮೇಶ್ವರ' ಎಂಬ ಬಿರುದನ್ನು ಧರಿಸಿ, ಅಶ್ವಮೇಧಯಾಗವನ್ನು ಮಾಡಿದನು. ಹರ್ಷವರ್ಧನನು ಇವನ ಮೇಲೆ ದಂಡೆತ್ತಿ ಬಂದಾಗ ಅವನ ಸೈನ್ಯದಲ್ಲಿ ಬರೀ ಆನೆಗಳೇ ಅರವತ್ತು ಸಾವಿರವಿದ್ದವು. ಎಂದ ಮೇಲೆ ಅವನ ಕುದುರೆ ಕಾಲಾಳುಗಳ ಸೈನ್ಯವು ಎಷ್ಟಿತ್ತೆಂಬುದನ್ನು ನೀವೇ ಊಹಿಸಿರಿ. ಅಂದಿನಿಂದ ಉತ್ತರ ಹಿಂದುಸ್ಥಾನದ ಇತಿಹಾಸವು ಮುಗ್ಗಿತು. ಕರ್ನಾಟಕದ ಇತಿಹಾಸಕ್ಕೆ ಕಳೆಯೇರುತ್ತ ಹೋಯಿತು. ಇವನ ರಾಜ್ಯ ವಿಸ್ತಾರವು ನರ್ಮದೆಯಿಂದ ದಕ್ಷಿಣಕ್ಕೆ ಇಡೀ ದಕ್ಷಿಣಾ ಪಥವನ್ನೇ ಆಕ್ರಮಿಸಿತ್ತು, ಪೂರ್ವ, ಪಶ್ಚಿಮ, ದಕ್ಷಿಣ ಸಮುದ್ರದ ನಡುವಿನ ನಾಡೆಲ್ಲವೂ ಇವನ ಕೈ ಸೇರಿತ್ತು. ಹ್ಯುವೆನ್ತ್ಸಂಗ್ ಎಂಬ ಚೀನ ದೇಶದ ಪ್ರವಾಸಿಯು ೬೩೯ ನೆಯ ಇಸ್ವಿಯ ಸುಮಾರಿಗೆ ಈ ಪುಲಿಕೇಶಿಯ ರಾಜ್ಯದೊಳಗೆ ಸಂಚಾರಮಾಡಿದನು. ಅವನು ನಮ್ಮೀ ಕರ್ನಾಟಕವನ್ನೂ, ಪುಲಿಕೇಶಿಯ ಆಗಿನ ಪ್ರಜೆಗಳನ್ನೂ, ಅವರ ನಡೆ ನುಡಿಗಳನ್ನೂ ಅತ್ಯಂತ ಸುಂದರವಾಗಿ ವರ್ಣಿಸಿದ್ದಾನೆ (ವೈಭವವರ್ಣನೆ ಪ್ರಕ