ಸುಖವ ಬಲ್ಲಾತ ಸುಖಿಯಲ್ಲ ದುಃಖವ ಬಲ್ಲಾತ ದುಃಖಿಯಲ್ಲ. ಸುಖ_ದುಃಖವೆರಡನೂ ಬಲ್ಲಾತ ಜ್ಞಾನಿಯಲ್ಲ. ಹುಟ್ಟದ ಮುನ್ನ ಸತ್ತವರ ಕುರುಹ ಬಲ್ಲಡೆ ಬಲ್ಲ ಗುಹೇಶ್ವರ.