ಒಕ್ಕು ಮಿಕ್ಕುದ ಕೊಂಬ ನಿಶ್ಚಲಪ್ರಸಾದಿ ನೀ ಕೇಳಾ. ಒಕ್ಕುದಾವುದು? ಮಿಕ್ಕುದಾವುದು? ಬಲ್ಲಡೆ ನೀ ಹೇಳಾ. ಒಕ್ಕು ಹೋಹುದು ಕಾಯ ಮಿಕ್ಕು ಹೋಹುದು ಪ್ರಾಣ. ಇದು ತಕ್ಕುದೆಂದರಿದು ಕೊಳಬಲ್ಲಡೆ ಸಿಕ್ಕುವನು ನಮ್ಮ ಗುಹೇಶ್ವರನು.