ಹರಿಯ ಬಾಯ ಹಾಲು ಉರಿಯ ಕೈಯ ಬೆಣ್ಣೆ ಗಿರಿಯ ಮೇಲಣ ಶಿಶು ಹರಿದಾಡುತ್ತಿದೆ ಕರೆಯಿಂ ಭೋ ಹಾಲುಗುಡಿ[ಯೆ]. ಸುರಪತಿಯ ಗಜವೇರಿ ಮರಳಿ ಹೋಹನ ಕಂಡು ಕರೆಯಿಂ ಭೋ. ಹರನ ಮಂತಣಿಯ ಶೂಲದಲ್ಲಿ ಶಿರದಲುಂಗುಟ ಊರಿ ನೆರೆವುತ್ತಿರ್ದುದ ನಾನೇನೆಂಬೆ ಗುಹೇಶ್ವರಾ.