ದೇಹಿಗೆ ದೇಹಿಯಾಗಿರ್ಪುದರ ಭೇದವನು ಆರು ಬಲ್ಲರು ? ಹರಿಬ್ರಹ್ಮಾದಿಗಳರಿಯರು ಮನುಮುನಿಗಳರಿಯರು ಸಿದ್ಧಸಾಧಕರರಿಯರು. ಅರಿವಿಂಗೆ ಅರಿವಾಗಿರ್ಪುದನು ನಿನ್ನ ಅರಿವಿಂದ ಅರಿಯಬಹುದೆ ? ಗುಹೇಶ್ವರಲಿಂಗವನರಿವಡೆ ನೀನರಿಯದಂತಿರಬೇಕು.