ಸಮಯವ ಬಿಡಬಹುದೆ ಅಯ್ಯಾ ? ಅಟ್ಟ ಅಶನವಾದಡೂ ಕಲಸುವದಕ್ಕೆ ಕೈ ಉಂಬುದಕ್ಕೆ ಬಾಯಿ ಬೇಕು. ಉಂಬುದಿಲ್ಲಾ ಎಂದು ಸಂದೇಹವ ಹರಿದಲ್ಲಿ ಸಮಯ ಒಂದೂ ಇಲ್ಲ ಎನಬೇಕು. ಗುಹೇಶ್ವರನೆಂಬನ್ನಕ್ಕ ಬಂಧ_ಮೋಕ್ಷವನರಿಯಬೇಕು ಘಟ್ಟಿವಾಳಯ್ಯಾ.