ಭೂಮಿಯಾಕಾಶ ಒಂದು ಜೀವನದುದರ. ಅಲ್ಲಿ ಘನವೇನು ಘನವೆನ್ನದವಂಗೆ? ಕಿರಿದೇನು ಕಿರಿದೆನ್ನದವಂಗೆ ? ಆ ಘನವು ಮನಕ್ಕೆ ಗಮಿಸಿದಡೆ ಇನ್ನು ಸರಿಯುಂಟೆ ಗುಹೇಶ್ವರಾ ?