ವಿಷಯಕ್ಕೆ ಹೋಗು

ಶರಣಂಗೆ ಆಕಾಶವೆ ಅಂಗ,

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಶರಣಂಗೆ ಆಕಾಶವೆ ಅಂಗ
ಆ ಅಂಗಕ್ಕೆ ಸುಜ್ಞಾನವೆ ಹಸ್ತ
ಆ ಹಸ್ತಕ್ಕೆ ಶಿವಸಾದಾಖ್ಯ
ಆ ಸಾದಾಖ್ಯಕ್ಕೆ ಪರಾಶಕ್ತಿ
ಆ ಶಕ್ತಿಗೆ ಪ್ರಸಾದವೆ ಲಿಂಗ
ಆ ಲಿಂಗಕ್ಕೆ ಶಾಂತ್ಯತೀತವೆ ಕಳೆ
ಆ ಕಳೆಗೆ ಶ್ರೋತ್ರೇಂದ್ರಿಯವೆ ಮುಖ
ಆ ಮುಖಕ್ಕೆ ಸುಶಬ್ದದ್ರವ್ಯಂಗಳನು
ರೂಪು ರುಚಿ ತೃಪ್ತಿಯನರಿದು ಆನಂದಭಕ್ತಿಯಿಂದರ್ಪಿಸಿ
ಆ ಸುಶಬ್ದಪ್ರಸಾದವ ಭೋಗಿಸಿ ಸುಖಿಸುತ್ತಿಹನು ಕೂಡಲಚೆನ್ನಸಂಗಾ
ನಿಮ್ಮ ಶರಣ.