ಅಗ್ಘವಣಿಯ ತಂದು ಮಜ್ಜನವ ಮರೆದವನ ಪುಷ್ಪವ ತಂದು ಪೂಜೆಯ ಮರೆದವನ ಓಗರವ ತಂದು ಅರ್ಪಿತವ ಮರೆದವನ ಲಿಂಗವ ಕಂಡು ತನ್ನ ಮರೆದವನ ಮಹಾಘನವ ಒಳಕೊಂಡಿತ್ತು ಗುಹೇಶ್ವರ.