ತ್ರಿಭುವನವೆಂಬ ಪಂಜರದೊಳಗೆ ಸಂಸಾರಚಕ್ರದಲ್ಲಿ_ ಹೊನ್ನು ಪ್ರಾಣವೆ ಪ್ರಾಣವಾಗಿ ಹೆಣ್ಣು ಪ್ರಾಣವೆ ಪ್ರಾಣವಾಗಿ ಮಣ್ಣು ಪ್ರಾಣವೆ ಪ್ರಾಣವಾಗಿ ಆ ಸುಖದ ಸೊಕ್ಕಿನಲ್ಲಿ ಈಸಿಯಾಡುತ್ತಿರ್ದರಲ್ಲಾ ಬಹುವಿಧದ ವ್ಯವಹಾರ ವೇಧಿಸಿದವರು ಗುಹೇಶ್ವರಾ.