ಹುಟ್ಟುವಾತ ನಾನಲ್ಲಯ್ಯಾ ಹೊಂದುವಾತ ನಾನಲ್ಲಯ್ಯಾ. ಅದೇನೆಂಬೆನಯ್ಯಾ ಎಂತೆಂಬೆನಯ್ಯಾ? ನಿಜವನರಿದ ಬಳಿಕ ಮತ್ತೆ ಹುಟ್ಟಲುಂಟೆ ಗುಹೇಶ್ವರಾ.