ನಕಾರವೇ ಪೃಥ್ವಿ:ಮಃಕಾರವೇ ಅಪ್ಪು
ಶಿಕಾರವೇ ಅಗ್ನಿ
ವಾಕಾರವೇ ವಾಯು
ಯಕಾರವೇ ಆಕಾಶ
ಓಂಕಾರವೇ ಆತ್ಮಸ್ವರೂಪು ನೋಡಾ. ಮತ್ತೆ ನಕಾರವೇ ಬ್ರಹ್ಮ
ಮಃಕಾರವೇ ವಿಷ್ಣು
ಶಿಕಾರವೇ ರುದ್ರ
ವಾಕಾರವೇ ಈಶ್ವರ
ಯಕಾರವೇ ಸದಾಶಿವ
ಓಂಕಾರವೇ ಮಹಾತ್ಮನು ನೋಡಾ. ಮತ್ತೆ ಅಂತ್ರರ್ಯಾಮಿಯೇ ನಕಾರ
ಚೈತನ್ಯ ಮಃಕಾರ
ಭಾವನೇ ಶಿಕಾರ
ಕರ್ತಾರನೇ ವಾಕಾರ
ಕ್ಷೇತ್ರಜ್ಞನೇ ಯಕಾರ
ಶಿವನೆ ಓಂಕಾರ ನೋಡ. ಮತ್ತೆ ಕರ್ಮಾಂಗ ಸ್ವರೂಪನಪ್ಪ ಭಕ್ತನೇ ನಕಾರ. ವಿದ್ಯಾಂಗ ಸ್ವರೂಪನಪ್ಪ ಮಾಹೇಶ್ವರನೇ ಮಃಕಾರ. ಕಾಮಾಂಗ ಸ್ವರೂಪನಪ್ಪ ಪ್ರಸಾದಿಯೇ ಶಿಕಾರ. ಯೋಗಾಂಗ ಸ್ವರೂಪನಪ್ಪ ಪ್ರಾಣಲಿಂಗಿಯೇ ವಾಕಾರ. ಭೂತಾಂಗ ಸ್ವರೂಪನಪ್ಪ ಶರಣನೆ
ಯಕಾರ. ಶಿವಾಂಗ ಸ್ವರೂಪನಪ್ಪ ಐಕ್ಯನೇ ಓಂಕಾರ ನೋಡಾ. ಮತ್ತೆ ನಕಾರವೇ ಸದ್ಭಕ್ತಿ
ಮಃಕಾರವೇ ನೈಷಿ*ಕಾಭಕ್ತಿ
ಶಿಕಾರವೇ ಅವಧಾನಭಕ್ತಿ
ವಾಕಾರವೇ ಅನುಭಾವಭಕ್ತಿ
ಯಕಾರವೇ ಆನಂದಭಕ್ತಿ
ಓಂಕಾರವೇ ಸಮರಸಭಕ್ತಿ ನೋಡ. ಮತ್ತೆ ಆತ್ಮತತ್ವವೇ ನಕಾರ
ವಿದ್ಯಾತತ್ವವೇ ಮಃಕಾರ
ಶಿಕಾರವೇ ಶಿವತತ್ವ ನೋಡಾ. ವಾಕಾರವೇ ಅನುಭಾವಭಕ್ತಿ
ಯಕಾರವೇ ಆನಂದಭಕ್ತಿ
ಓಂಕಾರವೇ ಸಮರಸಭಕ್ತಿ ನೋಡ. ಮತ್ತೆ ಆತ್ಮತತ್ವವೇ ನಕಾರ
ವಿದ್ಯಾತತ್ವವೇ ಮಃಕಾರ
ಶಿಕಾರವೇ ಶಿವತತ್ವ ನೋಡ. ವಾಕಾರವೇ ಈಶ್ವರತತ್ವ
ಯಕಾರವೇ ಸದಾಶಿವತತ್ವ
ಓಂಕಾರವೇ ಪರತತ್ವ ನೋಡಾ. ಮತ್ತೆ ನಕಾರವೇ ಸುಚಿತ್ತ ಹಸ್ತ
ಮಃಕಾರವೇ ಸುಬುದ್ಧಿ ಹಸ್ತ
ಶಿಕಾರವೇ ನಿರಹಂಕಾರ ಹಸ್ತ
ವಾಕಾರವೇ ಸುಮನ ಹಸ್ತ
ಯಕಾರವೇ ಸುಜ್ಞಾನ ಹಸ್ತ
ಓಂಕಾರವೇ ಸದ್ಭಾವ ಹಸ್ತ
ಇಂತಿವು ಅಂಗಷಡಕ್ಷರ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.