ಹುಲಿಯ ಬೆನ್ನಲ್ಲಿ ಒಂದು

ವಿಕಿಸೋರ್ಸ್ದಿಂದ



Pages   (key to Page Status)   


ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ
ಮೇದು ಬಂದೆನೆಂದಡೆ
ಇದ ಕಂಡು ಬೆರಗಾದೆ. ರಕ್ಕಸಿಯ ಮನೆಗೆ ಹೋಗಿ ನಿದ್ರೆಗೈದು ಬಂದೆನೆಂದಡೆ
ಇದ ಕಂಡು ಬೆರಗಾದೆ. ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದಡೆ
ಇದ ಕಂಡು ಬೆರಗಾದೆ_ಗುಹೇಶ್ವರಾ.