ಯೋನಿಗ್ರಾಮದಲ್ಲಿ ಹುಟ್ಟಿ ದೇಹಪ್ರಪಂಚವನರಿಯದೆ ಭಕ್ತರೆಂತಾದಿರಿ ಭೋ ! ಭಕ್ತಿ ಷಟ್ಸ್ಥಲದ ಭೇದವ ನಿಶ್ಚೈಸಲರಿಯದೆ ಜಂಗಮವೆಂತಾದಿರಯ್ಯಾ ? ನಿಃ ಕಾಮಿಯಾಗಿ ನಿಃ ಪ್ರಿಯನಾಗಿ ನಿರ್ಮೋಹಿಯಾಗಿ
ನಿರಾಶ್ರಿತನಾಗಿ ನಿರ್ಲೇಪನಾಗಿ
ಉಭಯಗುಣ ರಹಿತನಾಗಿ
ಸರ್ವಾಂಗದಲ್ಲಿ ನಿರ್ಮೋಹಿಯಾಗಿ
ತನು ಮನ ಧನ ಸುಖಾದಿಗಳ ನಿರ್ವಹಿಸಿ
ಬಂದುದನೆ ಪರಿಣಾಮಿಸಿ ಇರಬಲ್ಲಡೆ ಜಂಗಮಸ್ಥಲವಹುದು. ಆತನೆ ಜಂಗಮವೆಂಬುದಾಗಿತ್ತಾಗಿ ಗುಹೇಶ್ವರ ಲಿಂಗ ತಾನೆಂಬೆ.