ಗ್ರಾಮಮಧ್ಯದ ಮೇಲಣ ಮಾಮರ ಸೋಮಸೂರ್ಯರ ನುಂಗಿತ್ತಲ್ಲಾ! ಅಮರಗಣಂಗಳ ನೇಮದ ಮಂತ್ರ ಬ್ರಹ್ಮಾಂಡಕೋಟಿಯ ಮೀರಿತ್ತಲ್ಲಾ! ಸುಮನ ಸುಜ್ಞಾನದೊಳಗಾಡುವ ಮಹಾಮಹಿಮಂಗೆ ನಿರ್ಮಳವಾಯಿತ್ತು_ಗುಹೇಶ್ವರಾ.