ಮಾಯದ ಕೈಯಲಿ ಓಲೆ ಕÀಂಠವ ಕೊಟ್ಟಡೆ ಲಗುನ ವಿಗುನವ ಬರೆಯಿತ್ತು ನೋಡಾ ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದಡೆ ಅದು ಸಿರಿಯ ಸಿಂಗಾರವಾಯಿತ್ತು ನೋಡಾ. ಅಂಬರದೊಳಗಾಡುವ ಗಿಳಿ ಪಂಜರದೊಳಗಣ ಬೆಕ್ಕ ನುಂಗಿ ರಂಭೆಯ ತೋಳಿಂದ ಅಗಲಿತ್ತು ನೋಡಾ_ಗುಹೇಶ್ವರಾ.