ವಿಷಯಕ್ಕೆ ಹೋಗು

ಕಿಚ್ಚು ಬಯಲೆಂದಡದು ನಿರವಯವಕೆ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಕಿಚ್ಚು ಬಯಲೆಂದಡದು ನಿರವಯವಕೆ ಹತ್ತಿ ಹೊತ್ತಿದುದುಂಟೆ ? ಅರಿವು ನಿಜವೆಂದಡೆ ಅಡಗುವುದಕ್ಕೊಂದು ನಾಮ ಉಂಟು. ಅಗ್ನಿರೂಪಿನಲ್ಲಿ ಹುಟ್ಟಿ ಆ ರೂಪ ದಗ್ಧವ ಮಾಡಿದಲ್ಲದೆ ತನ್ನ ಹೊದ್ದಿಗೆ ಕೆಡದು. ಆ ಉಭಯವನರಿವನ್ನಬರ ಕೈಯ ಕುರುಹು
ಅರಿವನ ಜ್ಞಾನ ಪರಿಪೂರ್ಣವಾಗಿರಬೇಕು. ನಮ್ಮ ಗುಹೇಶ್ವರಲಿಂಗದಲ್ಲಿ ಆ ಉಭಯವ ತಿಳಿವನ್ನಬರ ತನ್ನ ಹಿಂಗಿರಬೇಕು ಕಾಣಾ
ಎಲೆ ಅಂಬಿಗರ ಚೌಡಯ್ಯ.