ಮೂರುಲೋಕದ ಧೀರೆ ನಿದ್ರಾಂಗನೆ ಎಲ್ಲರನೂ ಹಿಂಡಿ ಹೀರಿ ಪ್ರಾಣಾಕರ್ಷಣೆಯ ಮಾಡಿ ಕಟ್ಟಿ ಕೆಡಹಿದಳಲ್ಲಾ ! ಇವಳ ಗೆಲುವ ಧೀರನಾರುವನೂ ಕಾಣೆ ಇವಳ ಬಾಣಕ್ಕೆ ಗುರಿಯಾಗಿ ಏಳುತ್ತ ಬೀಳುತ್ತಲಿದ್ದರು ಎಲ್ಲರೂ_ಗುಹೇಶ್ವರಾ.