ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮದಾಸಸ್ವಾಮಿಗಳ ಚರಿತ್ರ. ೨೭ ನಾದನು, ಆಗ ರಂಗನಾಥ ಸ್ವಾಮಿಗಳು ನಕ್ಕು-ನಾವು ಭ ತೂರಾಗಿರುವದ ರಿಂದ ನಮ್ಮ ಸಂಜಗೆ ಸಮರ್ಥರು ಕೂಡ್ರುವದಿಲ್ಲೆನ್ನುತ್ತಾರೆ, ಆದ್ದರಿಂದ ನಾವು ಇಲ್ಲಿಯೇ ಭೋಜನ ತೀರಿಸಿಕೊಳ್ಳಬೇಕು. ಹೌದೋ?” ಎಂದು ಕಾರ ಕೂನ ನನ್ನು ಕೇಳಿದರು, ಕಾರಕೂನನು ನಮ್ರತೆಯಿಂದ ಕೈಮುಗಿದು- ಸ್ವಾಮಿಗಳು ಸರ್ವಜ್ಞರೇ ಇದ್ದೀರಿ' ಎಂದು ಹೇಳಿದನು ಆಗ ರಂಗನಾಥಸ್ವಾಮಿಗಳು ಕಾರ ಕನನಿಗೆ-ಒಳ್ಳದು. ನಾವು ಇಲ್ಲಿಯೇ ಭೋಜನದ ವ್ಯವಸ್ಥೆಯನ್ನು ಮಾಡಿ ಕಳು, ನಮ್ಮ ಬಗ್ಗೆ ನೀವು ಚಿಂತೆ ಮಾಡಬೇಡಿರೆಂದು ಸವರ್ಧರಿಗೆ ತಿಳಿ ಸರಿ” ಎಂತ ಹೇಳಿ ಅವನನ್ನು ಕಳಿಸಿದರು. ತರುವಾಯ ರಂಗನಾಥಸ್ವಾಮಿಗಳು ತಮ್ಮ ಶಿಷ್ಯನಿಗ-ಎಲೋ ಹೊರಗೆ ಹೋಗಿ ಏನಾದರೂ ತೆಗೆದುಕೊಂಡು ಬe ಡು ಅಡಿಗೆಯ ವ್ಯವಸ್ಥೆಯನ್ನು ಮಾಡಿ ಊಟವನ್ನು ಮೂಡಿಸು” ಎಂದು ಹೇ ಳಿದರು. ಶಿಷ್ಯನು-“ ಸ್ವಾಮಿಅಡಿಗೆಯ ಪಾತ್ರಗಳು ಇಲ್ಲ” ಎಂದು ಹೇಳಿ ದನು, ಅದಕ್ಕೆ ಸ್ವಾಮಿಗಳು-ಹೊಸ ಮಡಿಕೆಗಳನ್ನು ಕುಂಬಾರನ ಮನೆ ಯಿಂದ ತರಿಸು” ಎಂದು ಹೇಳಿದರು, ಅದರಂತೆ ಅವನು ಮಡಿಕೆಗಳನ್ನು ತರಿಸಿ ದನು. ತರುವಾಯ ಶಿಷ್ಯನು--ಸ್ವಾಮಿ, ಅಡಿಗೆಯ ಸಾಹಿತ್ಯ ವೆಲ್ಲಿ?” ಎಂದು ಕೇ ಳಿದನು, ಸ್ವಾಮಿಗಳು-«ಹೋಗಿ ತಗೆದುಕೊಂಡು ಬಾ ” ಎಂದು ಹೇಳಿದರು. ಅದಕ್ಕೆ ಶಿಷ್ಯನು-u ಸ್ವಾಮಿ, ಅಲ್ಲಿಂದ ಪೇಟೆಯು ದೂರಿರುತ್ತದೆ, ಇಲ್ಲಿಂಕೂ ಯಾ ವ ಸಾಹಿತ್ಯವೂ ದೊರಕುವದಿಲ್ಲ” ಅಂದನು, ಅದನ್ನು ಕೇಳಿ ರಂಗನಾಥ ಸ್ವಾಮಿಗ ಕು-ಆಎಲಾ, ನಮಗೇನು! ಹೊರಗೆ ದೃಷ್ಟಿಗೆ ಬಿದ್ದದ್ದನ್ನು ತೆಗೆದುಕೊಂಡು ಬಂ ದು ಕುದಿಸಿ ಅಡಿಗೆ ಮಾಡು” ಎಂತ ಆಜ್ಞಾಪಿಸಿದರು, ಆಗ ಒಬ್ಬ ಶಿಷ್ಯನು ಹೊ ರಗೆ ಹೋಗಿ ಹುಡುಕಲಗಿ ಏನೂ ಅವನ ಕಣ್ಣಿಗೆ ಬೀಳಲಿಲ್ಲ, ಒಂದು ಕೊಬ್ಬಿ ದ ಕೋಣವು ಮಾತ್ರ ಹೊರಗೆ ನಿಂತಿತ್ತು. ಅದನ್ನು ನೋಡಿದವನೇ ಒಳಗೆ ಸಾ ಮಿಗಳ ಹತ್ತಿರ ಹೋಗಿ ಕೋಣವು ನಿಂತ ವರ್ತಮಾನವನ್ನು ಹೇಳಿದನು, ಶಾ ಮಿಗಳು-ಒಳ್ಳೇದು, ಆ ಕೋಣವನ್ನೇ ಒಗ್ಗಿಕೊಂಡು ಬಾ” ಎಂದು ಹೇಳಿ? ಅದು ಒಳಗೆ ಬಂದ ಕೂಡಲೆ ಅದರ ಶಿರಚ್ಛೇದನ ಮಾಡಲಿಕ್ಕೆ ಜನಾರ್ದನ ಗೂ ಸಾವಿಗೆ ಅಪ್ಪಣಿ ಮಾಡಿದರು, ಅದಕ್ಕೆ ಅವನು-* ನಾನೆಂದೂ ಈ ಕೆಲಸವನ್ನು ಮಾಡಿಲ್ಲ”ವೆಂದು ಹೇಳಿದನು, ಆಗ ಸ್ವಾಮಿಗಳು ತಾವೇ ಕತ್ತಿಯ ವರಿಯನ್ನು ತ ಗೆದು ಅದರ ಶಿರಸ್ಸನ್ನು ಕೊಯ್ದು ತಮ್ಮ ಶಿಷ್ಯರಿಗೆ « ಇದರ ಮಾಂಸವನ್ನು ನೀವು ಇನ್ನು ತೆಗೆದು ಅದನ್ನು ಕುದಿಸಿ ರಘುಪತಿಗೆ ನೈವೇದ್ಯವನ್ನು ಅರ್ಪಿಸಿರಿ” ಎಂದು ಆಜ್ಞೆಯನ್ನಿತ್ತರು. ಈ ಮೇರೆಗೆ ಅವರ ಯಾವತ್ತು ಶಿಷ್ಯರು ಈ ಉದ್ಯೋಗದಲ್ಲಿ ತೊಡಗಿದರು, ಶಿವಾಜಿ ಮಹಾರಾಜರ ಕಡೆಯಿಂದ ನಿದೋಪವನ್ನು ಹೇಳಲಿಕ್ಕೆ ಹೋಗಿದ್ದ ಕಾರಕೂನನು ಇದನ್ನೆಲ್ಲ ನೋಡಿ ಹೌಹಾರಿ ಅಲ್ಲಿಯೇ ಕೂತುಕೊಂಡು