ಹಸಿವಿನ ಪ್ರೇಮಕ್ಕೆ ಬೋನವ ಹಿಡಿವರು. ತೃಷೆಯ ಪ್ರೇಮಕ್ಕೆ ಮಜ್ಜನಕ್ಕೆರೆವರು. ದೇವರಿಲ್ಲ ಭಕ್ತರಿಲ್ಲ; ನಾನೂ ಇಲ್ಲ ನೀನೂ ಇಲ್ಲ; ಗುಹೇಶ್ವರಾ ಪೂಜಿಸುವರೂ ಇಲ್ಲ ಪೂಜೆಗೊಂಬವರೂ ಇಲ್ಲ.