ವಗತಣ. ನ್ಯೂನತೆ ಇದಿಲ್ಲ, ಮಹಾರಾಜರು ಭೂಜನೋತ್ತರೆ ತಾಂಬೂಲವನ್ನು ಸೇವಿಸಿ ತುಕಾರಾಮನ ಮುಂದೆ ಕೈಜೋಡಿಸಿ ಕುಳಿತು-* ಸ್ವಾಮಿ, ಒಂದು ಸಾರೆ ಸ ಮರ್ಧರು ಇಂಥಾ ಅದ್ಭುತ ಸಾಮರ್ಥ್ಯವನ್ನು ತೋರಿಸಿದರು. ಈ ಹೊತ್ತು ಆದ ನೇ ಅಲ್ಲಿ ಕಂಡೆವು. ಇಂಥಾ ಅದ್ಭುತ ಸಾಮರ್ಥ್ಯವ ಯಾತರಿಂದ ಉಂಟಾಗುತ್ತ ಬೆಂಬುವದನ್ನು ನಿಮ್ಮ ಬಾಯಿಂದಲೇ ಕೇಳುವದಕ್ಕೆ ಸಮರ್ಥರು ಅಪ್ಪಣತೆಯನ್ನು ಮಾಡಿದ್ದಾರೆ. ದಯಮಾಡಿ ಅದನ್ನು ತಿಳಿಸಬೇಕು ” ಎಂದು ಪ್ರಾರ್ಥನೆ ಮಾಡಿದ ರು. ಆಗ ತುಕಾರಾಮನು ನಕ್ಕು-* ರಾಜನೇ! ಅಲ್ಪಜ್ಞ ಮನುಷ್ಯರು ಸಂಶಯ ತೆಗೆದುಕೊಂಡಿದ್ದರೆ ಶೋಭಿಸುತ್ತಿತ್ತು, ನಿನ್ನಂಧ ವಿಚಾರವಂತನು ಸಂಶಯ ತ ಗೆದುಕೊಂಡರೆ ಏನು ಹೇಳತಕ್ಕದ್ದು? ರಾಮದಾಸಸ್ವಾಮಿಗಳು ಮಾರುತಿಯ ಅವತಾರವಿರುತ್ತಾರೆ. ಅವರ ಅಛಮಾತ್ರದಿಂದ ಏನು ಆಗಲಿಕ್ಕಿಲ್ಲ! ನಾನಂತೂ ವಿಠೋಬನದಾಸನು ನನಗೆ ಮನೆಯಲ್ಲಿ ತಿನ್ನಲಿಕ್ಕೆ ಭಕ್ಕರಿ ಇಲ್ಲದಿದ್ದರೂ ಕಾಮ ಧೇನು ನಮ್ಮಲ್ಲಿರುತ್ತದೆ ! ನಮ್ಮ ಮನೆಯಲ್ಲಿ ಕೂಡ್ರಲಿಕ್ಕೆ ಸ್ಥಳವಿಲ್ಲದಿದ್ದರೂ ವೈಕುಂಠ ಲೋಕವೆಲ್ಲಾ ನಮ್ಮದೇ ಆಗಿರುತ್ತದೆ! ಎಂದು ಹೇಳಿದರು. ಇದ ನ್ನು ಕೇಳಿ ಶಿವಾಜಿಮಹಾರಾಜರು ಬಹಳ ಸಂತೋಷಪಟ್ಟು “ ಇನ್ನು ಮುಂದೆ ಸಂಶಯವೇನೂ ಉಳಿಯಲಿಲ್ಲ " ಎಂದು ಹೇಳಿ ತುಕಾರಾಮನಿಗೆ ದಂಡವತ್ಪ್ಪ ಣಾಮಗಳನ್ನು ಮಾಡಿ ಹೊರಟುಹೋದರು. ಅನುಗ್ರಹವನ್ನು ತಿರಿಗಿಕೊಟ್ಟದ್ದು-ಸಮರ್ಥರು ತಮ್ಮ ಹತ್ಯರ ಅನುಗ್ರ ಹ ಪಡೆದುಕೊಂಡವರಿಗಲ್ಲ ಶಿಷ್ಯರನ್ನಾಗಿ ಮಾಡಿಕೊಳ್ಳುತ್ತಿದ್ದರು. ಶಿಷ್ಯರಿಗೆ ಮಠ ದಲ್ಲಿ ಎರಡೂಹೂತು, ಎಥಾಸ್ಥಿತ ಭೋಜನಮಾಡಿ ಸೌಖ್ಯದಿಂದಿರಲಿಕ್ಕೆ ಅನುಕೂಲ ವಿತ್ತು, ಆದ್ದರಿಂದ ಅನೇಕ ಸೋಮಾರಿ ಜನರು ಮಠದಲ್ಲಿ ಶಿಷ್ಯರಾಗಿರುತ್ತಿದ್ದರು. ಇಂಥಾ ಸೋಮಾರಿಗಳಲ್ಲಿ ಒಬ್ಬ ಬ್ರಾಹ್ಮಣನನ್ನು ಸಮರ್ಥರು ತಮ್ಮ ಸಂಗಡ ಸಂ ಚಾರಕ್ಕೆ ಕರೆದೊಯ್ಯಹತ್ತಿದರು. ಅವನು ಸಮರ್ಥರ ಸಂಗಡ ಅಡವಿಯಲ್ಲಿ ಸಂಚ ರಿಸಿ, ಧಂಡಿಯಲ್ಲಿ ಗದಗದ ನಡುಗಿ, ಉಪವಾಸದಿಂದ ಕಳವಳಗೊಂಡು ತುಕಾರಾ ಮನ ಕೀರ್ತಿಯನ್ನು ಕೇಳಿ ಅವನ ಹತ್ರರ ಅನುಗ್ರಹ ಪಡೆದರೆ ತನಗೆ ಸೌಖ್ಯವಾ ದೀತೆಂದು ಅಶಿಸಿ, ಆ ಮಹಾತ್ಮನ ಕಡೆಗೆ ಹೋದನು, ಆಗ ತುಕಾರಾಮನು: ಒಮ್ಮೆ ಒಬ್ಬರ ಕಡೆಯಿಂದ ಅನುಗ್ರಹ ಪಡೆದವರಿಗೆ ನಾನು ಅನುಗ್ಗಹ ಕೊಡುವೆ ದಿಲ್ಲ” ಎಂತ ಹೇಳಿದನು. ಆಗ ಆ ಬ್ರಾಹ್ಮಣನು ಅಂಗಲಾಚಿ ಬೇಡಿಕೊಂಡದ್ದರಿಂದ * ನೀನು ರಾಮದಾಸರ ಕಡೆಯಿಂದ ಪಡೆದುಕೊಂಡ ಅನುಗ್ರಹವನ್ನು ಅವರಿಗೆ ತಿರಿ ಗಿ ಒಪ್ಪಿಸಿ ಬಾ; ಅಂದರೆ ನಾನು ಅನುಗ್ರಹವನ್ನು ಕೊಡುವೆನು ಎಂದು ಸಮಾ ಧಾನ ಮಾಡಿದನು ಅದನ್ನು ಕೇಳಿ ಆ ಬ್ರಾಹ್ಮಣನು ಸಮರ್ಥರ ಕಡೆಗೆ ಹೋಗಿ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೨೬
ಗೋಚರ