ಗುರುವಿನಲ್ಲಿ ಭಕ್ತಿಯಿಲ್ಲ ಲಿಂಗದಲ್ಲಿ ನಿಷೆ*ಯಿಲ್ಲ ಜಂಗಮದಲ್ಲಿ ವಿಶ್ವಾಸವಿಲ್ಲ ಪಾದೋದಕ ಪ್ರಸಾದದಲ್ಲಿ ಪ್ರೇಮವಿಲ್ಲ. ಬರಿದೆ ಭಕ್ತರೆಂಬ ಭವಭಾರಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.