ಪ್ರ ಸ್ತಾ ವ ನೆ.
ದ್ರಾಕ್ಶಿ, ಆ೦ಜೀರು, ಕಿತ್ತಳೆ, ಮಾವ, ಬಾಳೆ ಮೊದಲಾದ ಮಧುರವಾದ ಫಲಗಳೂ ಷಡ್ರಸಯುಕ್ತವಾದ ಪಕ್ವಾನ್ನಗಳೂ ನಾಲಿಗಿಗೆ ಬೇಕಾದಷ್ಟು ರುಚಿಯನ್ನು ಕೊಟ್ಟಾಗ್ಯಾ ಅವುಗಳಿಂದ ಜಡದೇಹಕ್ಕೆ ಮಾತ್ರ ಪೌಷ್ಟಿಕತೆಯು ಉಂಟಾಗುತ್ತದಲ್ಲದೆ ಆತೊನ್ನೆತಿಗೆ ಏನೂ ಸಹಾಯವಾಗುವದಿಲ್ಲ, ಇದಲ್ಲದೆ ಇವುಗಳನ್ನು ಸೇವಿಸುವದರಿಂದಾಗುವ ಆನಂದವು ಕೇವಲ ಕ್ಷಣೆಕವಾದದ್ದು. ಆದರೆ ಸಾಧುಸಜ್ಜನರ ಚರಿತ್ರಗಳನ್ನು ಓದುವದರಿ೦ದ ಅಥವಾ ಕೇಳುವದರಿಂದ ಕಾಮಕ್ರೋಧಾದಿ ಮನಸ್ಸಿನ ದುರ್ವ್ಯಾಕಾರಗಳು ಕಡಿಮೆಯಾಗಿ ಶ್ರೀಮತ್ಪರಮೇ ಶ್ವರನ ಪಾದಾರವಿಂದದಲ್ಲಿ ಭಕ್ತಿಯನ್ನಿಟ್ಟು ಸದಾಚರಣದಿಂದ ನಡೆಯುವ ಮನಸ್ಸು ಹುಟ್ಟುವದು, ಆದ್ದರಿಂದ ಮನಸ್ಸು ಯಾವಾಗಲು ಬ್ರಹ್ಮಾನಂದದಿಂದ ತುಂಬಿ ಕೊಂಡು ಮೋಕವರ್ಗದ ಕಡೆಗೆ ಎಳಿಸುವದು, ಅಂದಮೇಲೆ ಸಾಧುಸಜ್ಜನರ ಚರಿತ್ರಗಳ ಮಹಿಮೆಯನ್ನು ಎಷ್ಟು ವಣರ್ಿಸಿದರೂ ಕಡಿಮೆಯೇ ಸರಿ! ಇಂಧ ಸಾಧುಸಜ್ಜನರಲ್ಲಿ ಅತ್ಯಂತ ಶ್ರೇಷ್ಠರೆನಿಸಿಕೊಂಡ ಶ್ರೀ ರಾಮದಾಸ ಸ್ವಾಮಿಗಳ ಚರಿತ್ರ ವನ್ನು ನಾನು ನನ್ನ ಅಲ್ಪಮತಿಗನುಸರಿಸಿ ಬರೆದು ನನ್ನ ಭಾವಾನನಿಗೆ ಪ್ರೇಮ ಪೂರ್ವಕವಾಗಿ ಅರ್ಪಿಸಿರುತ್ತೇನೆ, ಇದರ ಮುದ್ರಣದ ಸಲ ಪ್ರತಿಗಳನ್ನು ಓದುವ ಕಾಲಕ್ಕೆ ಹಲಕೆಲವು ದೋಷಗಳು ಶ ಉಳಿದದ್ದರಿಂದ ಅವಗಳಲ್ಲಿ ಮಹತ್ವ ವಾದವುಗಳನ್ನು ಶುದ್ದಿ ಪತ್ರಿಕೆಯೊಳಗೆ ಕೊಟ್ಟಿತ್ತೇನೆ, ಆ ಶುದ್ದಿ ಪತ್ರಿಕೆಯನ್ನು ವಾಚಕರು ದಯಮಾಡಿ ಓದಿ ನೋಡಿ ಅದರಂತೆ ತಮ್ಮ ಪ್ರತಿ ಯನ್ನು ತಿದ್ದಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ.
ಧಾರವಾಡ, ತಾರೀಖ ಮಾಹೆ ಮೇ
ಸನ್ನ ೧೯೦೯ ಇಸವಿ
ಗದಿಗೆಯ್ಯಾ ಹುಚ್ಚಯ್ಯಾ ಹೊನ್ನಾವರಮಠ,ಗ್ರ೦ಧಕರ್ಚ: