ಉಪಾಧಿಯಿಲ್ಲದೆ ಬೇಡಬಲ್ಲಡೆ ಗಮನವಿಲ್ಲದೆ ಸುಳಿಯಬಲ್ಲಡೆ ನಿರ್ಗಮನಿಯಾಗಿರಬಲ್ಲಡೆ ಅದು ವರ್ಮ ಅದು ಸಂಬಂಧ ಅವರ ನಡೆ ಪಾವನ ಅವರ ನುಡಿ ಸತ್ಯ ಅವರ ಜಗದಾರಾಧ್ಯರೆಂಬೆನು ಕಾಣಾ ಗುಹೇಶ್ವರಾ.