ಭಕ್ತನಾಧೀನವಾಗಿ ಭಕ್ತಿಯ ಬೇಡ ಬಂದವನಲ್ಲ. ಮುಕ್ತಿಯಾಧೀನವಾಗಿ ಮುಕ್ತಿಯ ಬೇಡಬಂದವನಲ್ಲ. ಅಶನಾತುರನಾಗಿ ವಿಷಯವ ಬಯಸಿ ಬಂದವನಲ್ಲ. ಗುಹೇಶ್ವರನ ಶರಣ ಸಂಗನಬಸವಣ್ಣ ಮಾಡುವ ಭಕ್ತನಲ್ಲಾಗಿ ನಾನು ಬೇಡುವ ಜಂಗಮವಲ್ಲ ಕಾಣಾ ಚೆನ್ನಬಸವಣ್ಣಾ.