ವಿಷಯಕ್ಕೆ ಹೋಗು

ಪೃಥ್ವಿಯನತಿಗಳೆದು ಅಪ್ಪುವಿಲ್ಲ, ಅಪ್ಪುವನತಿಗಳೆದು

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಪೃಥ್ವಿಯನತಿಗಳೆದು ಅಪ್ಪುವಿಲ್ಲ
ಅಪ್ಪುವನತಿಗಳೆದು ಅಗ್ನಿಯಿಲ್ಲ
ಅಗ್ನಿಯನತಿಗಳೆದು ವಾಯುವಿಲ್ಲ
ವಾಯುವನತಿಗಳೆದು ಆಕಾಶವಿಲ್ಲ
ಆಕಾಶವನತಿಗಳೆದು ನಾದವಿಲ್ಲ
ನಾದವನತಿಗಳೆದು ಬಿಂದುವಿಲ್ಲ
ಬಿಂದುವನತಿಗಳೆದು ಕಳೆಯಿಲ್ಲ
ಕಳೆಯನತಿಗಳೆದು ಆತ್ಮನಿಲ್ಲ
ಆತ್ಮವನತಿಗಳೆದು ಗುಹೇಶ್ವರನೆಂಬ ಲಿಂಗವಿಲ್ಲ.