ಮುನ್ನ ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗದಲ್ಲಿ ನೆಟ್ಟನೆ ಅಂಗ ಮನ ಪ್ರಾಣಂಗಳು ಸಂಗಿಸಬೇಕು. ಬಳಿಕ ನಡೆನುಡಿಯಲ್ಲಿ ಆ ಲಿಂಗ ಸನ್ನಿಹಿತವಾಗಿರಬೇಕಲ್ಲದೆ ಹಿಂಗಿರಲಾಗದು. ಕೊಡುಕೊಂಬ ವ್ಯವಹಾರದಲ್ಲಿ ಆ ಲಿಂಗ ಸನ್ನಿಹಿತವಾಗಿರಬೇಕಲ್ಲದೆ ಹಿಂಗಿರಲಾಗದು. ಜಾಗ್ರಸ್ವಪ್ನಸುಷುಪ್ತಿಗಳಲ್ಲಿ ಆ ಲಿಂಗ ಸನ್ನಿಹಿತವಾಗಿರಬೇಕಲ್ಲದೆ ಹಿಂಗಿರಲಾಗದು. ಅದೆಂತೆಂದೊಡೆ : ``ಗಚ್ಛನ್ ತಿಷ*ನ್ ಸ್ವಪನ್ ಜಾಗ್ರನ್ ಉನ್ಮಿಷನ್ ನಿಮಿಷನ್ನಪಿ