ಕಾಯವೆ ಸಕಲ ಪ್ರಾಣವೆ ಸಕಲ_ನಿಷ್ಕಲ ಭಾವವೆ ನಿಷ್ಕಲಲಿಂಗವಾಗಿದ್ದ ಮತ್ತೆ ಬೇರೆ ಆಯತ ಸ್ವಾಯತ ಸನ್ನಹಿತವೆಂಬುದಿಲ್ಲ ನೋಡಾ. ಶಿವ_ಶಕ್ತಿ (ಭಕ್ತಿ_ಶಕ್ತಿ ?) ಸಂಬಂಧವೆ ದೇಹದೇಹಿಗಳಾಗಿದ್ದ ಬಳಿಕ ಗುಹೇಶ್ವರಲಿಂಗದಲ್ಲಿ ಬೇರೊಂದು ಕುರುಹುವಿಡಿದು ಅರಿಯಲೇಕಯ್ಯಾ ಚನ್ನಬಸವಣ್ಣಾ ?