ವಿಷಯಕ್ಕೆ ಹೋಗು

ಯಜಮಾನ - ಪ್ರೇಮ ಚಂದ್ರಮ

ವಿಕಿಸೋರ್ಸ್ದಿಂದ

ಚಿತ್ರ: ಯಜಮಾನ
ಸಾಹಿತ್ಯ: ಕೆ. ಕಲ್ಯಾಣ್
ಸಂಗೀತ: ರಾಜೇಶ್ ರಾಮನಾಥ್
ಗಾಯನ: ರಾಜೇಶ್


ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿ ಕೊಡುವೆ
ಹೃದಯಾನೆ ಬಿಚ್ಚಿ ಇಡುವೆ
ಈ ಭೂಮಿಯಿರೊವರೆಗೂ ನಾ ಪ್ರೇಮಿಯಾಗಿರುವೇ

ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

---

ಬಾನಲ್ಲಿ ಹುಣ್ಣಿಮೆಯಾದರೆ ನೀ
ಸವೆಯಬೇಡ ಸವೆಯುವೆ ನಾ
ಮೇಣದ ಬೆಳಕೆ ಆದರು ನೀ
ಕರಗಬೇಡ ಕರಗುವೆ ನಾ

ಹೂದೋಟವೆ ಆದರೆ ನೀನು
ಹೂಗಳ ಬದಲು ಉದುರುವೆ ನಾ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಈ ಪ್ರತಿರೂಪ ಬಿಡಿಸಲು ನಾ
ನೆತ್ತರಲೆ ಬಣ್ಣವನಿಡುವೆ
ಈ ಪ್ರತಿಬಿಂಬವ ಕೆತ್ತಲು ನಾ
ಎದೆಯ ರೋಮದ ಉಳಿ ಇಡುವೆ
ಕವಿತೆಯ ಹಾಗೆ ಬರೆದಿಡಲು
ಉಸಿರಲೆ ಬಸಿರು ಪದವಿಡುವೆ

ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ

ಪ್ರೇಮ ಚಂದ್ರಮ ಕೈಗೆ ಸಿಗುವುದೆ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ
ಮನಸಾರೆ ಮೆಚ್ಚಿ ಕೋಡುವೆ
ಹೃದಯಾನ ಬಿಚ್ಚಿ ಕೊಡುವೆ
ಈ ಭೂಮಿ ಇರುವರೆಗೂ ನಾ ಪ್ರೇಮಿಯಾಗಿರುವೆ

ಪ್ರೇಮ ಚಂದ್ರಮ ಕೈಗೆ ಸಿಗುವುದೇ
ಹೇಳೆ ತಂಗಾಳಿ, ನೀ ಹೇಳೆ ತಂಗಾಳಿ