ಕಿಲಾಡಿ ಜೋಡಿ - ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ
ಸಾಹಿತ್ಯ: ಚಿ ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಹೋ..ಓ....ಹೋ.....ಓ.......ಹೋ...ಓ......
ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ (೨)
ಮಾತನೂ ನಿಲ್ಲಿಸು ಸುಮ್ಮನೇ ಪ್ರೀತಿಸು....ಪ್ರೀತಿಸು...ಪ್ರೀತಿಸು...ಪ್ರೀತಿಸು... .
Kiss Me Kiss Me Kiss Me Kiss Me.............{ನಾಚಿಕೆ..}
ಇಂದು ನಿನ್ನಾಸೆ ಹೆಚ್ಚಾಗಿ ನಾನು ನಿನ್ನಿಂದ ಹುಚ್ಚಾಗಿ
ನನ್ನಾ ಕಣ್ಣಾಸೆ ನನ್ನಾ ತುಟಿಯಾಸೆ ಅತಿಯಾಗಿ ನಾ ಸೋತು ಹೋದೆ....
ಇಂದು ನಿನ್ನನ್ನು ಕಂಡಾಗ ಏಕೋ ನನ್ನಲ್ಲಿ ಆವೇಗ
ಮೈಯ್ಯಿ ಮೈಯ್ಯನ್ನು ಸೋಕಿ ನಿಂತಾಗ ಎದೆಯಲ್ಲಿ ನೂರಾರು ರಾಗ......
I love u...I love u....I love u.....
ಹೋ ಓ...ಹೋ ಓ....ಹೋ ಓ.....ಹೋ ಓ.......
ಆತುರ ಇನ್ನೇಕೆ ಕಾತರ ಇಲ್ಲೇಕೆ ನಾನಿಲ್ಲಿ ಇರುವಾಗ
ಹೇ...ಪ್ರೀತಿಗೆ ಸೋತೆನು ನನ್ನನೇ ಮರೆತೆನು.......
ಆತುರ ಇನ್ನೇಕೆ ಕಾತರ ಇಲ್ಲೇಕೆ ನಾನಿಲ್ಲಿ ಇರುವಾಗ
ಹೇ..... ಪ್ರೀತಿಗೆ ಸೋತೆನು ನನ್ನನೇ ಮರೆತೆನು....ಮರೆತೆನು....ಮರೆತೆನು.........{ಆತುರ.. .}
ಸಾಕು ಸಾಕೆಂಬ ಮಾತಿಲ್ಲ ಏಕೆ ಹೀಗೆಂದು ಗೊತ್ತಿಲ್ಲ
ಇನ್ನೂ ಬೇಕೆಂಬ ಆಸೆ ಮೈತುಂಬಿ ನಿಂತಲ್ಲೆ ನಿಲಲಾರೆನಲ್ಲ.....
ತಾಳು ತಾಳೀಗ ಇಲ್ಲಲ್ಲ ಸೇರೋ ಆಕಾಲ ಬಂದಿಲ್ಲ
ಇಂತ ಹಗಲಲ್ಲಿ ಹೀಗೆ ದಾರೀಲಿ ಕಂಡೋರು ನಗಬಾರದಲ್ಲ......
I love u I love u....I love u......
ಹೋ...ಓ....ಹೋ...ಓ.....ಹೋ....ಓ......
ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
ಮಾತನು ನಿಲ್ಲಿಸು ಸುಮ್ಮನೇ ಪ್ರೀತಿಸು...ಪ್ರೀತಿಸು....ಪ್ರೀತಿಸು...
ಕಿಸ್ ಮಿ ಕಿಸ್ ಮಿ ಕಿಸ್ ಮಿ ಕಿಸ್ಸ್ ಮಿ.......