ಸದಸ್ಯ:Prakrutisudarshan

ವಿಕಿಸೋರ್ಸ್ದಿಂದ

ಕರ್ನಾಟಕದ ಸಾಂಸ್ಕೃತಿಕ ನಗರ ಎಂದು ಪ್ರಸಿದ್ಧವಾದ ಮೈಸೂರು ನನ್ನ ಊರು. ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿ.ಸ್ಸಿಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಓದುತ್ತಿದ್ದೇನೆ. ಮುಂದೆ ಖಗೋಳ ವಿಜ್ಞಾನಿ ಆಗಬೇಕೆಂಬ ಆಸೆ. ನಾನು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಕಲೆಗಳಲ್ಲಿ ಜೂನಿಯರ್ ಪದವಿ ಮುಗಿಸಿ ಸಂಗೀತವನ್ನು ಮುಂದುವರಿಸುತ್ತಿದ್ದೇನೆ. ನನ್ನ ತಂದೆ ಆಂಗ್ಲ ಭಾಷೆಯಲ್ಲಿ ಎಂ.ಎ, ಎಂ.ಫಿಲ್ ಪದವಿ ಮುಗಿಸಿ, ಮೈಸೂರಿನ ವಿ-ಲೀಡ್ ಎಂಬ ಏನ್.ಜಿ.ಒನಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ನನಗೆ ಕನ್ನಡ ಭಾಷೆಯ ಮೇಲೆ ಬಹಳ ಅಭಿಮಾನ. ಕುವೆಂಪು, ಬೀಚಿ, ಲಂಕೇಶ್ ಅವರ ಕಥಾಸಂಕಲನಗಳು ಬಹಳ ಪ್ರಿಯ. ಅದಲ್ಲದೆ ನನಗೆ ಬರೆಯುವ ಅಭ್ಯಾಸ. ಪ್ರವಾಸದ ಅನುಭವಗಳು, ಸಣ್ಣ ಕಥೆಗಳು, ಇವುಗಳನ್ನು ಆಂಗ್ಲ ಭಾಷೆಯಲ್ಲಿ ಬರೆಯುತ್ತೇನೆ. ನನ್ನ ಜೀವನದ ಸ್ಪೂರ್ತಿ ಎಂದರೆ, ಆಲ್ಬರ್ಟ್ ಐನ್ಸ್ಟೀನ್ ಮತ್ತು ಸ್ಟೆಫೆನ್ ಹಾಕಿಂಗ್. ನಾನು ಸ್ವಾಮಿ ವಿವೇಕಾನಂದ ಅವರ ತತ್ವಗಳಿಂದ ಪ್ರಭಿವಿತಳು. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ತೋರಿಸಿಲ್ಲ ಆದರೆ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಗಳೆಂದರೆ ಬಹಳ ರುಚಿ. ನನಗೆ ವಿಶ್ವದ ಅತಿ ಹೆಚ್ಚು ಜಾಗಗಳಿಗೆ ಪ್ರವಾಸ ಮಾಡಬೇಕೆಂಬ ಕುತೂಹಲ ಇದೆ. ಹದಿನೆಂಟು ವರ್ಷಗಳ ಈ ಬಾಲಕಿ ತನ್ನ ಗುರಿ ಮುಟ್ಟಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಕನಸು ಕಂಡಿದ್ದಾಳೆ.


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Prakrutisudarshan
ಸದಸ್ಯರ ಚರ್ಚೆಪುಟ: