ಮಾಡುವಾತ ನಾನಲ್ಲಯ್ಯಾ, ನೀಡುವಾತ

ವಿಕಿಸೋರ್ಸ್ದಿಂದ


Pages   (key to Page Status)   

ಮಾಡುವಾತ ನಾನಲ್ಲಯ್ಯಾ
ನೀಡುವಾತ ನಾನಲ್ಲಯ್ಯಾ
ಬೇಡುವಾತ ನಾನಲ್ಲಯ್ಯಾ
ನಿಮ್ಮ ಕಾರುಣ್ಯವಲ್ಲದೆ. ಎಲೆ ದೇವಾ
ಮನೆಯ ತೊತ್ತು ಅಲಸಿದಡೆ ಒಡತಿ ಮಾಡಿಕೊಂಬಂತೆ
ನಿನಗೆ ನೀ ಮಾಡಿಕೊ
ಕೂಡಲಸಂಗಮದೇವಾ.