ವಿಷಯಕ್ಕೆ ಹೋಗು

ಅಂಗ ಲಿಂಗ ಸಂಬಂಧವನ್ನುಳ್ಳ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಂಗ ಲಿಂಗ ಸಂಬಂಧವನ್ನುಳ್ಳ ನಿಜವೀರಶೈವ ಭಕ್ತಾರಾಧ್ಯ ಜಂಗಮದ ಭಕ್ತಿ ವಿವಾಹದ ಕ್ರಮವೆಂತೆಂದಡೆ: ಪಾಣಿಗ್ರಹಣ
ವಿಭೂತಿಪಟ್ಟ
ಏಕಪ್ರಸಾದ
ಭಕ್ತಗಣ
ಸಾಕ್ಷಿಯಾಗಿ ಭಕ್ತಿವಿವಾಹವಾಗಿ
ಭಕ್ತ ಜಂಗಮವನಾರಾಧಿಸಿ
ಭಕ್ತಿಪದಾರ್ಥ ಮತ್ತು ಭಕ್ತಿಪ್ರಸಾದವ ಕೊಂಡು ನಿಜಮುಕ್ತಿಯನೈದುವದೆ ವೀರಶೈವ ಭಕ್ತಾರಾಧ್ಯರುಗಳ ಭಕ್ತಿಕಲ್ಯಾಣ ನೋಡ. ಇಂತಪ್ಪ ಭಕ್ತಿಕಲ್ಯಾಣವನರಿಯದೆ ಸತ್ಯಸದಾಚಾರ ಭಕ್ತಿಯುಕ್ತವಾದ ಗುರುಲಿಂಗ ಜಂಗಮದ ಪಾದೋದಕ ಪ್ರಸಾದವೆಂಬ ಪಂಚಾಚಾರಕ್ಕೆ ಹೊರಗಾದ ಭವಿ ಶೈವ ಕೃತಕಶಾಸ್ತ್ರವಿಡಿದು ಮಾಡುವ ಪಂಚಸೂತಕ ಸಂಕಲ್ಪ ಪಾತಕವನುಳ್ಳ ಶಕುನ ಸ್ವಪ್ನ ಸಾಮುದ್ರಿಕಲಕ್ಷಣ ಸ್ತ್ರೀ ಪುರುಷ ಜಾತಕ ಚರಿತ್ರೆ ಕಾಮಶಾಸ್ತ್ರ ಕಲಾಭೇದ ರಾಶಿಫಲ
ನಕ್ಷತ್ರ ಯೋಗ ಕರಣ ದಿನ ತಿಥಿಗಳಿಗೆ ಲಗ್ನಮುಹೂರ್ತ ಭವಿಶಬ್ದ ಪಾರ್ವ ಧಾರಾಪೂರಿತವಾದಿಯಾದ ಜಗದ್ವ್ಯವಹಾರವನು
ಪಂಚಾಂಗ ಕರ್ಮಸೂತಕ ವಿವಾಹವೆನಿಪ್ಪ ಭವಿಮಾಟಕೂಟ ಭವಿ ದುಷ್ಕ್ರೀಯನ್ನು ಭವಿಶೈವರಹಿತ ಭವಹರವಾದ ನಿಜವೀರಶೈವಾರಾಧ್ಯ
ಭಕ್ತಜಂಗಮದ ಭಕ್ತಿವಿವಾಹಕ್ಕೆ ಆ ಭವಿದುಷ್ಕ್ರೀಯವ ಮಾಡಿದವಂಗೆ ಗುರುವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ. ಇಂತಪ್ಪ ಅನಾಚಾರಿಗಳು ಭಕ್ತಾರಾಧ್ಯಸ್ಥಲಕ್ಕೆ ಸಲ್ಲರಾಗಿ ಅವರಿರ್ವರನ್ನು ಕೂಡಲಚೆನ್ನಸಂಗಯ್ಯ ಅಘೋರ ನರಕದಲ್ಲಿಕ್ಕುವನು.