ಅಂಧಕಾರವೆಂಬ ಗಹ್ವರದೊಳಗೆ ನಿದ್ರೆಯೆಂಬ

ವಿಕಿಸೋರ್ಸ್ದಿಂದ


Pages   (key to Page Status)   

ಅಂಧಕಾರವೆಂಬ ಗಹ್ವರದೊಳಗೆ ನಿದ್ರೆಯೆಂಬ ರಾಕ್ಷಸಿ ಗ್ರಹಿಸಿ
ವೀರರ ನಿಗ್ರಹಿಸಿ ನೀರು ಮಾಡಿ
ದ್ಥೀರರ ಧೃತಿಗೆಡಿಸಿ
ಶಾಪಾನುಗ್ರಹಸಮರ್ಥರ ಸತ್ತಂತಿರಿಸಿ
ನಿಚ್ಚ ನಿಚ್ಚ ಜೀವನಾಶವ ಮಾಡುತ್ತಿಹಳು ನೋಡಾ
ಕೂಡಲಸಂಗಮದೇವಾ.