ಅಂಬರದ ಮಂಡಲದಲ್ಲಿ ಚಿದಾದಿತ್ಯನುದಯವಾಗಲು ಅಂಬುಜ ಉದಯವಾಗಿ ಅಮರಗಣಂಗಳು ಸಂಭ್ರಮಿಸುತ್ತಿದಾರೆ ನೋಡಾ. ಅಮರಗಣ ತಿಂಥಿಣಿಯೊಳಗೆ ಅನುಪಮ ಮಹಿಮನ ಕಂಡು ಅಪ್ಪಿ ಅಗಲದೆ ಅಪ್ರತಿಮನಾಗಿರ್ದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವವ ಪ್ರಭುವೇ.