ಅಘಟಿತ ಘಟಿತವೆಂಬ ಮಹಾಘನವ ಸಾಧಿಸುವಡೆ ಮಡಿವಾಳನ ಕೃಪೆಯಿಲ್ಲದನ್ನಕ್ಕರ ಎಂತರಿಯಬಪ್ಪುದು ನಿಜಲಿಂಗೈಕ್ಯವನು ? ಎನ್ನ ಆರೂಡಿsಯ ಅರಿವಿಂಗೆ ನೀನೆ ಶೃಂಗಾರ. ಕೂಡಲಚೆನ್ನಸಂಗಮದೇವರಲ್ಲಿ ಮಡಿವಾಳನ ಕೈಯ ಸ್ವಾಯತವಾದೆನು ಕಾಣಾ ಪ್ರಭುವೆ.