ಆಕಾರ ನಿರಾಕಾರವೆಂಬೆರಡೂ ಸ್ವರೂಪಂಗಳು ; ಒಂದು ಆಹ್ವಾನ ಒಂದು ವಿಸರ್ಜನ ಒಂದು ವ್ಯಾಕುಳ ಒಂದು ನಿರಾಕುಳ. ಉಭಯಕುಳರಹಿತ ಗುಹೇಶ್ವರಾ_ನಿಮ್ಮ ಶರಣ ನಿಶ್ವಿಂತನು.