ಆಚಾರಲಿಂಗಭಕ್ತಿ ಗುರುಲಿಂಗಭಕ್ತಿ ಶಿವಲಿಂಗಭಕ್ತಿ ಜಂಗಮಲಿಂಗಭಕ್ತಿ ಪ್ರಸಾದಲಿಂಗಭಕ್ತಿ ಮಹಾಲಿಂಗಭಕ್ತಿ ಇಂತೀ ಆರು ಸಹಿತ ಆಚಾರ; ಆಚಾರಸಹಿತ ಗುರು ಗುರುಸಹಿತ ಲಿಂಗ ಲಿಂಗಸಹಿತ ಜಂಗಮ. ಜಂಗಮಸಹಿತ ಪ್ರಸಾದ ಪ್ರಸಾದಸಹಿತ ಮಹಾಲಿಂಗ. ಇಂತೀ ಎಲ್ಲ ಸ್ಥಲಗಳು ತಾನಾಗಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.