ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತಸ್ಥಶಿಲೆ

ವಿಕಿಸೋರ್ಸ್ದಿಂದ

ಅಂತಸ್ಥಶಿಲೆ

ನವೀನ ಶಿಲೆಗಳಿಂದ ಆವೃತವಾಗಿ ತಳದಲ್ಲಿರುವ ಹಳೆಯ ಶಿಲಾರಾಜಿಗಳಿಗೆ ಅಂತಸ್ಥಶಿಲೆಗಳೆಂದು (ಇನ್‍ಲೇಯರ್ಸ್) ಹೆಸರು.

ಜಲಶಿಲೆಗಳ ಮೇಲೆ 1. ಶಿಲಾ ಶಿಥಿಲೀಕರಣ 2. ಸ್ತರ ನಿರ್ಮಾಣ 3. ಸ್ತರ ಭಂಗ-ಈ ಪ್ರಕ್ರಿಯೆಗಳುಂಟಾದಾಗ ಅಂತಸ್ಥಶಿಲೆಗಳು ರೂಪುಗೊಳ್ಳುತ್ತವೆ. ಇವುಗಳಲ್ಲಿ ಎರಡು ವಿಧ. 1. ಸಮತಲ ಜಲಜಶಿಲೆಗಳು ಸಂಚಿತವಾದ ಮೇಲೆ ಮಡಿಕೆಗೊಂಡವು. ಆಮೇಲೆ ಇವು ಪುಡಿಪುಡಿಯಾಗುತ್ತವೆ. 2. ಸ್ಥರಭಂಗ ಕ್ರಿಯೆಗಳಿಂದ ಉಂಟಾದುವು.

ಚಿತ್ರ-1


ಒಂದನೆಯ ಚಿತ್ರದಲ್ಲಿ ಅದಿಂದ ಪ್ರಾರಂಭವಾಗಿ ಉ ವರೆಗೆ ಶಿಲಾಪದರಗಳು ಒಂದರ ಮೇಲೊಂದು ಕವಿದಿರುವುದನ್ನು ಕಾಣಬಹುದು. ಈ ಮಡಿಕೆಗಳು ಶಿಖರಾಕೃತಿಯಲ್ಲಿ ಬೆಳೆದಿವೆ. ಮೇಲಿನ ಪದರ ಮನೆಯ ಸೂರಿನಂತೆ ಇಕ್ಕಡೆಯಲ್ಲೂ ಇಳಿಜಾರಾಗಿ ಬಾಗಿದೆ. ಇಲ್ಲಿ ಆ ಭಾಗ ಅಂತಸ್ಥಶಿಲೆ.

ಚಿತ್ರ-2



ಎರಡನೆಯ ಚಿತ್ರದಲ್ಲಿ ಶಿಖರ ಕುಸಿದು ಕಣಿವೆಯಾಗಿದೆ. ಆ ಭಾಗದ ಅಂತಸ್ಥಶಿಲೆಯ ಎರಡೂ ಪಕ್ಕಗಳಲ್ಲಿ ವರ್ಣಾನುಕ್ರಮದಲ್ಲಿ ಇತರ ಶಿಲಾಪದರಗಳು ಏರ್ಪಟ್ಟಿವೆ. (ಐ.ಆರ್.ವಿ.)